Prolific Commentator Sri Jayateertha

ಪರಿಚಯ

ಶ್ರೀ ಸತ್ಯಪ್ರಮೋದತೀರ್ಥರಿಂದ ಸ್ಥಾಪಿತವಾದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ ಪ್ರಾಥಮಿಕ ತರ್ಕ, ವ್ಯಾಕರಣ, ವೇದಾಂತ ಗ್ರಂಥಗಳನ್ನು ಅಧ್ಯಯನ ಮಾಡಿ ಪೂಜ್ಯ ಗುತ್ತಲಾಚಾರ್ಯರಲ್ಲಿ ಶ್ರೀಮನ್ನ್ಯಾಯಸುಧಾ ಅಧ್ಯಯನ ಮಾಡಿ, ತಿರುಕೋಯಿಲೂರು ಕ್ಷೇತ್ರದಲ್ಲಿ ಶ್ರೀ ರಘೂತ್ತಮತೀರ್ಥರ, ಶ್ರೀ ಸತ್ಯಪ್ರಮೋದತೀರ್ಥರ ಹಾಗೂ ಮಹಾಸ್ವಾಮಿಗಳ ಸನ್ನಿಧಿಯಲ್ಲಿ, ಗುತ್ತಲಾಚಾರ್ಯರ ಷಷ್ಟ್ಯಬ್ದಿ ಉತ್ಸವದ ಸಂದರ್ಭದಲ್ಲಿ ನಡೆದ ಶ್ರೀಮನ್ನ್ಯಾಯಸುಧಾ ಮಂಗಳಮಹೋತ್ಸವದಲ್ಲಿ ಪಂಚಾಧಿಕರಣೀ ಪರೀಕ್ಷಯನ್ನು ಸಂಸ್ಕೃತದಲ್ಲಿ ಯಶಶ್ವಿಯಾಗಿ ನೀಡಿ ಸುಧಾಮಂಗಳ ನೆರವೇರಿಸಿ ಪಂಡಿತರಾದವರು ಡಾ. ರಾಚೂರಿ ರಾಘವೇಂದ್ರಾಚಾರ್ಯರು.

ಸದಾ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವ, ಪರೋಪಕಾರಿಗಳಾದ,  ಸದಾಚಾರವಂತರಾದ, ಶಾಸ್ತ್ರಗಳಲ್ಲಿ ಆಳವಾದ ಜ್ಞಾನ ಪಡೆದ ಇವರು ಮಹಾಸ್ವಾಮಿಗಳ ಸನ್ನಿಧಿಯಲ್ಲಿ, ಅವರಿಂದ ವಿಶೇಷವಾಗಿ ಛಲಕ್ಷಣೀ, ತರ್ಕತಾಂಡವ, ತತ್ವಪ್ರಕಾಶಿಕಾ ಹಾಗೂ ಸರ್ವಮೂಲ ಗ್ರಂಥಗಳ ಅಧ್ಯಯನ ಮಾಡುವ ಭಾಗ್ಯ ಪಡೆದು, ಶ್ರೀಗಳ ಆಜ್ಞೆಯಮೇರೆಗೆ  ವಿಶ್ವಮಧ್ವಮಹಾಪರಿಷತ್ತಿನಲ್ಲಿ ಉತ್ತರಾದಿಮಠದ ವೆಬ್ ಸೈಟ್ ನ ವ್ಯವಸ್ಥಾಪಕರಾಗಿ ಶ್ರೀಪಾದಂಗಳವರ ಉಪನ್ಯಾಸಗಳನ್ನು ಅಂತರ್ಜಾಲದ ಮುಖಾಂತರ ವಿಶ್ವದ ಮೂಲೆ ಮೂಲೆಗಳಿಗೂ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಶ್ರೀಪಾದಂಗಳವರ ವಿಶೇಷ ಅನುಗ್ರಹಕ್ಕೆ ಪಾತ್ರರಾದರು. ವೇದವಾಙ್ಮಯಕ್ಕೆ ಶ್ರೀಮದಾಚಾರ್ಯರ ಕೊಡುಗೆ ಎನ್ನುವ ಮಹಾಪ್ರಬಂಧವನ್ನು ಮಂಡಿಸಿ ಪಿ ಎಚ್ ಡಿ ಡಾಕ್ಟರೇಟ್ ಪದವಿಧರರಾದರು. ಉತ್ತಮ ಲೇಖಕರೂ, ಉಪನ್ಯಾಸಕರೂ ಆದ ಇವರು ಕನ್ನಡ, ತೆಲುಗು, ಆಂಗ್ಲ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಶ್ರೀಸುಧಾ ಮಾಸಪತ್ರಿಕೆಯಲ್ಲಿ ಇವರು ಬರೆಯುತ್ತಿರುವ ಸಂಧ್ಯಾವಂದನೆ  ಕುರಿತಾದ ವೈಜ್ಞಾನಿಕ ಲೇಖನ ಸರಣಿಯು ಪಾಠಕರ ವಿಶೇಷ ಮೆಚ್ಚುಗೆಯನ್ನು ಪಡೆಯುತ್ತಿದೆ.

ಸಂಸ್ಕತ ಭಾಷೆಯ ವಿಶೇಷ ಅಭಿಮಾನಿಗಳಾದ ಇವರು ತಮ್ಮ ಕುಟುಂಬವನ್ನು ಸಂಸ್ಕೃತ ಕುಟುಂಬವನ್ನಾಗಿ ರೂಪಿಸಿಕೊಂಡಿದ್ದಾರೆ. ತಮ್ಮ ವಿದ್ಯಾರ್ಥಿದಶೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನೂ ಸಂಸ್ಕೃತದಲ್ಲೇ ಮಾತನಾಡಿಸುತ್ತಾ ಸಂಸ್ಕೃತೋತ್ಸವಗಳ ಮೂಲಕ, ಪದ್ಯ, ಪ್ರಬಂಧ, ಗೀತರಚೆನಗಳ ಮೂಲಕ ವಿದ್ಯಾಪೀಠದಲ್ಲಿ ಸಂಸ್ಕೃತ ವಾತಾವರಣ ನಿರ್ಮಾಣಗೊಳ್ಳಲು ಕಾರಣರಾದರು. ವಿದ್ಯಾರ್ಥಿಗಳಿಗಾಗಿ ಇವರು ರಚಿಸಿರುವ ಸಂಸ್ಕೃತ ಗೀತೆಗಳ ಸಿ.ಡಿ ಈಡೇ ಸುಮನೋ ವಾಣೀಂ ಅನೇಕ ರಾಜ್ಯಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಜನ್ಮಶತಮಾನೋತ್ಸವನಿಮಿತ್ತ ಇವರು ರಚಿಸಿದ ಅಯಿ ಗುರುರಾಜ ಹಾಡು ಅಂತರ್ಜಾಲದಲ್ಲಿ viral ಆಗಿದೆ. ಇವರು ಸಿದ್ಧಪಡಿಸಿದ ಶ್ರೀಸತ್ಯಪ್ರಮೋದ ದರ್ಶನ ಕಿರು ಚಿತ್ರ ಅನೇಕ ಊರುಗಳಲ್ಲಿ ಪ್ರದರ್ಶನಗೊಂಡಿದೆ. ಸುಧಾದಿ ಟಿಪ್ಪಣೀ ಕಾರರಾದ ಯಾದವಾರ್ಯರಲ್ಲಿ ವಿಶೇಷ ಆಸಕ್ತರಾದ ಇವರು ಯಾದವಾರ್ಯರು – ಒಂದು ಸ್ಫೂರ್ತಿಕಿರಣ ಎನ್ನುವ ಕಿರುಚಿತ್ರವನ್ನು ಸಿದ್ಧಪಡಿಸಿದ್ದಾರೆ. ವಿವಿಧ ಕಲಾಸಕ್ತರಾದ ಇವರು ತಬಲ ಹಾಗೂ ವೀಣೆಯನ್ನು ನುಡಿಸುವುದರಲ್ಲಿ ಕುಶಲರು. ವೇಣೀಸಂಹಾರ, ಮಧ್ಯಮವ್ಯಾಯೋಗ ಮೊದಾಲಾದ ನಾಟಕಗಳನ್ನು ವಿದ್ಯಾರ್ಥಿಗಳಿಂದ ವಿಶಿಷ್ಟಿವಾಗಿ ಮಾಡಿಸಿ ವಿದ್ವಾಂಸರ ಮೊಚ್ಚುಗೆಯನ್ನು ಪಡೆದಿರುವರು.

ಲೌಕಿಕದಲ್ಲಿ Software Engineer ಪದವೀಧರರಾಗಿದ್ದ ಇವರು ತಮ್ಮ ಶಾಸ್ತ್ರೀಯ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು Workshops, Online Courses ಮೂಲಕ ಆಧುನಿಕ ಜನರಿಗೆ ಮನಮುಟ್ಟುವಂತೆ ದೇಶ, ವಿದೇಶಗಳಲ್ಲಿ ಮಧ್ವಶಾಸ್ತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಮ ಸ್ವಾಮೀ ಹರಿರ್ನಿತ್ಯಂ ಸ್ಟಿಕರ್ ಅಭಿಯಾನವನ್ನು ಯಶಶ್ವಿಯಾಗಿ ನಡೆಸಿ 5 ಲಕ್ಷ ಸ್ಟಿಕರ್ ಗಳನ್ನು ದೇಶದ ಎಲ್ಲಡೆ ವಿತರಿಸಿ ಆತ್ಮೋಪಾಸನ ಧ್ಯಾನ ಯೋಗವನ್ನು ಡಿವಿಡಿ ಮೂಲಕ ಪ್ರಸಿದ್ಧಿಗೆ ತಂದಿರುವ ಇವರು ಆತ್ಮಾಶ್ರಮ ವೆಂಬ ಆಧ್ಯಾತ್ಮಿಕ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳನ್ನು ಗುರುಕುಲ ಪದ್ಧತಿಯಲ್ಲಿ ಸಿದ್ಧಪಡಿಸುತ್ತಿದ್ದಾರೆ.

ಅಂಥಹ

ರಾಘವೇಂದ್ರಾಚಾರ್ಯ ಅಂತರ್ಗತ ಶ್ರೀ ಮೋದಸತ್ಯಾತ್ಮತೀರ್ಥರು ಅಂತರ್ಗತ ಮಧ್ವಮಾಮಾಧವರು ಎಲ್ಲರಿಗೂ ಅನುಗ್ರಹಿಸಲಿ.

ಇವರ ವಿಳಾಸ & ಸಂಪರ್ಕ :-

ಆತ್ಮಾಶ್ರಮ, 1586, BSK 6ನೇ ಹಂತ, 4ನೇ ಬ್ಲಾಕ್ , ಬೆಂಗಳೂರು

M :- 7259670376

L :-  080 2964 0376

ಕೊರೋನಾನಾಶಕ್ಕಾಗಿ ಸರ್ವರೂ ಪ್ರಾರ್ಥಿಸಿ.

ಸರ್ವೇ ಜನಾಃ ಸುಖಿನೋ ಭವಂತು !

ಸುಘೋಷಾಚಾರ್ಯ ಕೊರ್ಲಹಳ್ಳಿ